ಎರಚು ಸಿಡಿಗುಂಡು
	ಬಂದೂಕಿಗೆ ಅಳವಡಿಸಿರುವ ದುಂಡು ಭರಣಿಯನ್ನು ಸಿಡಿಸಿದಾಗ ಅದರಿಂದ ಎಲ್ಲೆಡೆಗಳಿಗೆ ಬಿರಿಯುವ ಸ್ಫೋಟಕ (ಪ್ರಾಪ್ನೆಲ್). ನಿರ್ಮಾಪಕ ಹೆನ್ರಿ ಪ್ರಾಪ್ನೆಲನ (1761-1842) ಹೆಸರನ್ನೇ ಈ ಅಸ್ತ್ರಕ್ಕೆ ನೀಡಲಾಗಿದೆ. ಶತ್ರುವಿನೆಡೆಗೆ ಎರಚುಸಿಡಿಗುಂಡನ್ನು ಹಾರಿಸಿದಾಗ ಅದರಿಂದ ವ್ಯಾಪಕವಾಗಿ ಸ್ಫೋಟಿಸುವ ಗುಂಡುಗಳು ಎದುರಾದ ಸೈನಿಕರಿಗೆ ಮೃತ್ಯುಕಾರಗಳು. 

(ಎ.ಎನ್.ಎಸ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ